Posts

Showing posts from September, 2019

Weekly Prediction

ಮೇಷ ರಾಶಿ :   ಮೇಷ ರಾಶಿಯವರಿಗೆ ವಾರದ ಮೊದಲ ದಿನ ಚಂದ್ರನು ಶುಭ ಫಲವನ್ನು ನೀಡುತ್ತಾನೆ. ಹತ್ತಿರದ ಪ್ರಯಾಣಗಳು ಫಲಪ್ರದವಾಗುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಧೈರ್ಯ ಹೆಚ್ಚಾಗುತ್ತದೆ. ಉತ್ತಮ ನೆರೆಹೊರೆ ಹೊಂದುತ್ತೀರಿ. ಆದರೆ ನಂತರದ ನಾಲ್ಕು ದಿನ ಅಶುಭ ಫಲಗಳನ್ನು ಪಡೆಯುತ್ತೀರಿ. ಮಾನಸಿಕವಾದ ಹಿಂಸೆ, ಸ್ಥಿರವಿಲ್ಲ ದ ನಿರ್ಧಾರಗಳು, ಭಯ, ಧನ ನಷ್ಟ, ಎದೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಮಕ್ಕಳೊಂದಿಗೆ ಅನವಶ್ಯಕವಾದ ವಾಗ್ವಾದಗಳು, ವಿಚಾರವಿಲ್ಲದೆ ಮಾಡುವ ವ್ಯವಹಾರದಿಂದ ತೊಂದರೆ, ಮಕ್ಕಳಿಗೆ ಅನಾರೋಗ್ಯ ವಾಗಬಹುದು. ಆದರೆ ವಾರದ ಕೊನೆಯ ದಿನ ಶತ್ರುಗಳ ನಿರ್ಮೂಲನೆ ಆಗುತ್ತದೆ. ಸಾಕಷ್ಟು ಧನ ಸಂಗ್ರಹವಾಗುವ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಗೃಹದಲ್ಲಿ ಶಾಂತಿ, ವ್ಯಾಧಿಗಳುನಿವಾರಣೆಯಾಗುತ್ತವೆ. ಅಕ್ಕಿ ಮತ್ತು ಗೋಧಿಯ ದಾನ ಮಾಡುವುದರಿಂದ ಸಮಾಧಾನವನ್ನು ಪಡೆಯಬಹುದು. ವೃಷಭ ರಾಶಿ :   ವೃಷಭ ರಾಶಿಯವರಿಗೆ 2ನೇ ಎರಡನೇ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗ ತೊಂದರೆಗಳನ್ನು ನೀಡುತ್ತದೆ. ಕುಟುಂಬದಲ್ಲಿ ಅಶಾಂತಿ, ಗರ್ಭಪಾತವಾಗುವ ಸಂಭವ, ಧನ ನಷ್ಟ, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಆದರೆ ಮಂಗಳ ಮತ್ತು ಬುಧವಾರ ದಲ್ಲಿ ಸ್ವಲ್ಪ ನೆಮ್ಮದಿ ಕಂಡರೂ ನಂತರದ ನಾಲ್ಕು ದಿನ ತೊಂದರೆಗಳಿಗೆ ಸಿಲುಕಿಕೊಳ್ಳುತ್ತೀರಿ. ಕಾನೂನುಬಾಹಿರವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಮನಃಶಾಂತಿ ಇಲ್ಲದೆ ತಿರುಗಾಟ, ಹತ್ತಿರದ...