Weekly Prediction

ಮೇಷ ರಾಶಿ : ಮೇಷ ರಾಶಿಯವರಿಗೆ ವಾರದ ಮೊದಲ ದಿನ ಚಂದ್ರನು ಶುಭ ಫಲವನ್ನು ನೀಡುತ್ತಾನೆ. ಹತ್ತಿರದ ಪ್ರಯಾಣಗಳು ಫಲಪ್ರದವಾಗುತ್ತದೆ. ಸ್ನೇಹಿತರಿಂದ ಸಹಾಯ ದೊರೆಯುತ್ತದೆ. ಧೈರ್ಯ ಹೆಚ್ಚಾಗುತ್ತದೆ. ಉತ್ತಮ ನೆರೆಹೊರೆ ಹೊಂದುತ್ತೀರಿ. ಆದರೆ ನಂತರದ ನಾಲ್ಕು ದಿನ ಅಶುಭ ಫಲಗಳನ್ನು ಪಡೆಯುತ್ತೀರಿ. ಮಾನಸಿಕವಾದ ಹಿಂಸೆ, ಸ್ಥಿರವಿಲ್ಲ ದ ನಿರ್ಧಾರಗಳು, ಭಯ, ಧನ ನಷ್ಟ, ಎದೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಮಕ್ಕಳೊಂದಿಗೆ ಅನವಶ್ಯಕವಾದ ವಾಗ್ವಾದಗಳು, ವಿಚಾರವಿಲ್ಲದೆ ಮಾಡುವ ವ್ಯವಹಾರದಿಂದ ತೊಂದರೆ, ಮಕ್ಕಳಿಗೆ ಅನಾರೋಗ್ಯ ವಾಗಬಹುದು. ಆದರೆ ವಾರದ ಕೊನೆಯ ದಿನ ಶತ್ರುಗಳ ನಿರ್ಮೂಲನೆ ಆಗುತ್ತದೆ. ಸಾಕಷ್ಟು ಧನ ಸಂಗ್ರಹವಾಗುವ ಅವಕಾಶಗಳು ಕಾಣಿಸಿಕೊಳ್ಳುತ್ತವೆ. ಗೃಹದಲ್ಲಿ ಶಾಂತಿ, ವ್ಯಾಧಿಗಳುನಿವಾರಣೆಯಾಗುತ್ತವೆ. ಅಕ್ಕಿ ಮತ್ತು ಗೋಧಿಯ ದಾನ ಮಾಡುವುದರಿಂದ ಸಮಾಧಾನವನ್ನು ಪಡೆಯಬಹುದು.
ವೃಷಭ ರಾಶಿ : ವೃಷಭ ರಾಶಿಯವರಿಗೆ 2ನೇ ಎರಡನೇ ಮನೆಯಲ್ಲಿ ರಾಹು ಮತ್ತು ಚಂದ್ರನ ಸಂಯೋಗ ತೊಂದರೆಗಳನ್ನು ನೀಡುತ್ತದೆ. ಕುಟುಂಬದಲ್ಲಿ ಅಶಾಂತಿ, ಗರ್ಭಪಾತವಾಗುವ ಸಂಭವ, ಧನ ನಷ್ಟ, ಕಣ್ಣಿಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಆದರೆ ಮಂಗಳ ಮತ್ತು ಬುಧವಾರ ದಲ್ಲಿ ಸ್ವಲ್ಪ ನೆಮ್ಮದಿ ಕಂಡರೂ ನಂತರದ ನಾಲ್ಕು ದಿನ ತೊಂದರೆಗಳಿಗೆ ಸಿಲುಕಿಕೊಳ್ಳುತ್ತೀರಿ. ಕಾನೂನುಬಾಹಿರವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದು, ಮನಃಶಾಂತಿ ಇಲ್ಲದೆ ತಿರುಗಾಟ, ಹತ್ತಿರದ ಸ್ನೇಹಿತರಿಂದ ಮೋಸ ಹೋಗುವ ಸಂಭವ ಇರುತ್ತದೆ. 5ನೇ ಮನೆಗೆ ಪ್ರವೇಶಿಸುವ ಕುಜ ವಾರಂತ್ಯದಲ್ಲಿ  ತೊಂದರೆಗಳನ್ನು ನೀಡುತ್ತಿದ್ದು ದೈಹಿಕವಾದ ಬಲಹೀನತೆ ಹೆಚ್ಚಾಗುತ್ತದೆ. ದುಷ್ಟ ಕೆಲಸಗಳು ಮಾಡುವುದರಿಂದ ಸಂತೋಷ ಸಿಗುತ್ತದೆ. ಸುಬ್ರಹ್ಮಣ್ಯನ ಆರಾಧನೆಯಿಂದ ಸ್ವಲ್ಪ ಮಟ್ಟಿಗೆ ಸಮಾಧಾನ ದೊರೆಯುತ್ತದೆ.
ಮಿಥುನ ರಾಶಿ : ಮಿಥುನ ರಾಶಿಯವರಿಗೆ ಭಾರತದ ಮೊದಲ ದಿನ ಉತ್ತಮವಾಗಿದ್ದು ರಾಶಿಯಲ್ಲಿರುವ  ರಾಹು ಹಾಗು ಚಂದ್ರರು ಶುಭ ಫಲಗಳನ್ನು ನೀಡುತ್ತಿದ್ದು ಶತ್ರುಗಳ ಮೇಲೆ ಜಯ, ಉತ್ತಮ ದಾಂಪತ್ಯ ಜೀವನ ನೀಡುತ್ತಿದ್ದು ಪರಸ್ತ್ರೀ ವ್ಯಾಮೋಹ ಕೂಡ ಹೆಚ್ಚಾಗುತ್ತದೆ. ರಾಶಿ ಅಥವಾ ಲಗ್ನ ದಲ್ಲಿರುವ ಚಂದ್ರ ಉನ್ನತ ಅಂತಸ್ಥ ನೀಡುತ್ತಾನೆ. ಉದ್ಯೋಗದಲ್ಲಿ ಬಡ್ತಿ, ಹಿರಿಯರ ಜೊತೆ ಉತ್ತಮ ಸಂಬಂಧ ಹೊಂದುವುದು, ಒಡವೆ ವಸ್ತುಗಳನ್ನು,ಸುಗಂಧ ದ್ರವ್ಯಗಳನ್ನು, ಹೊಂದುವ ಅವಕಾಶ ಆದರೆ ದ್ವಿತೀಯದಲ್ಲಿ ಸಂಚರಿಸುವ ಚಂದ್ರ ಮಂಗಳ ಮತ್ತು ಬುಧವಾರಗಳಲ್ಲಿ ಪ್ರಯತ್ನಗಳಲ್ಲಿ ಸೋಲನ್ನು ನೀಡುತ್ತಾನೆ. ಗುರು ಶುಕ್ರವಾರಗಳಲ್ಲಿ ಧೈರ್ಯ ಹೆಚ್ಚಾಗುತ್ತದೆ. ಉತ್ತಮ ಸಂಪರ್ಕವನ್ನು ಹೊಂದಿ ವಿಚಾರ ವಿನಿಮಯ ಮಾಡಿಕೊಂಡು ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳುವ ಸಮಯ ಇದಾಗಿದೆ. ಆದರೆ ವಾರಾಂತ್ಯದಲ್ಲಿ ವಾಹನಗಳಿಂದ ತೊಂದರೆ, ಬೇಸರದಲ್ಲೇ ವಾರಾಂತ್ಯ ಆಗುವ ಅವಕಾಶಗಳು ಇರುತ್ತವೆ. ಗುರುವಿನ ಆರಾಧನೆ ಶುಭ ತರುತ್ತದೆ.
ಕರ್ಕಾಟಕ ರಾಶಿ : ಕರ್ಕಾಟಕ ರಾಶಿಯವರಿಗೆ ವಾರದ ಮೊದಲ ದಿನ 12ನೇ ಮನೆಯಲ್ಲಿ ಸಂಚರಿಸುತ್ತಿರುವ ರಾಹು ಮತ್ತು ಚಂದ್ರ ಅಶುಭ ಫಲಗಳನ್ನು ನೀಡುತ್ತಿದ್ದು ದುರಾದೃಷ್ಟ, ಜನ್ಮ ಸ್ಥಳಗಳನ್ನು ಬಿಡುವಂತಹ ಸಂಭವ, ರಕ್ತ ಸಂಬಂಧಿಗಳಿಗೆ ವ್ಯಾಧಿಗಳು, ಆಸ್ತಿ ನಷ್ಟ, ಶೀಘ್ರಕೋಪ, ಸಣ್ಣ ವಿಷಯಗಳಿಗೆ ಮನಸ್ಸು ಮನಸ್ತಾಪ, ಗಾಯಗಳಾಗುವುದು, ಅಪಘಾತದ ಭಯ ಹುಟ್ಟಿಸುತ್ತದೆ. ಮಂಗಳ ಮತ್ತು ಬುಧವಾರಗಳಲ್ಲಿ ಅನುಕೂಲಗಳನ್ನು ಪಡೆಯುತ್ತೀರಿ. ಉನ್ನತ ಅಂತಸ್ತು ಪ್ರಾಪ್ತಿ, ಮಾನಸಿಕವಾಗಿ ಉಲ್ಲಾಸ ವಾಗುತ್ತದೆ. ಗುರು, ಶುಕ್ರವಾರಗಳಲ್ಲಿ ಮೂರನೇ ಮನೆಯನ್ನು ಪ್ರವೇಶಿಸುವ ಕುಜನು ಗೌರವ ಮತ್ತು ಐಶ್ವರ್ಯ ನೀಡುತ್ತಾನೆ. ಧೈರ್ಯದಿಂದ ಕಾರ್ಯವನ್ನು ನಿರ್ವಹಿಸಬಹುದು. ಕಲಾಕಾರರಿಗೆ ಒಳ್ಳೆಯ ಸಮಯ. ವಾರಾಂತ್ಯ ಕೂಡ ಮೂರನೇ ಮನೆಗೆ ಸಂಚರಿಸುವ ಚಂದ್ರನು ಉತ್ತಮ ಕೀರ್ತಿಯನ್ನು, ಧನಲಾಭವನ್ನೂ ನೀಡುತ್ತಾನೆ. ಸುಬ್ರಹ್ಮಣ್ಯನ ಆರಾಧನೆ ಶುಭ ತರುತ್ತದೆ.
ಸಿಂಹರಾಶಿ : ವಾರದ ಮೊದಲ ದಿನ ರಾಹುವಿನೊಡನೆ ಇರುವ ಚಂದ್ರಶುಭ ಫಲಗಳನ್ನು ನೀಡುತ್ತಾನೆ. ವಿದೇಶಿ ವ್ಯಾಪಾರದಿಂದ ಸಂತೋಷ, ಆದಾಯದಲ್ಲಿ ಹೆಚ್ಚಳ, ಸ್ಥಿರಾಸ್ತಿ ಆಭರಣಗಳು ಗಳಿಸುವಿಕೆ,  ಅಕಸ್ಮಾತ್ ಆದ ಬೆಳವಣಿಗೆ, ಜಾತಕರು ಮತ್ತು ಸಮಾಜಕ್ಕೆ ಉತ್ತಮ ಕಾರ್ಯಗಳನ್ನು ಮಾಡುವ ಮನಸ್ಸು ನೀಡುತ್ತಾನೆ. ವಾರ ಮಧ್ಯದಲ್ಲಿ ತೊಂದರೆಗಳು ನೀಡುವಂತಿದ್ದು ಸ್ತ್ರೀಯರಿಂದ ಅಧಿಕ ಖರ್ಚು, ಅನಾರೋಗ್ಯ, ತಾಯಿಯ ಸಂಬಂಧಿಕರ ಜೊತೆ ಕಲಹಗಳ ಆಗಬಹುದು. ಗುರುವಾರ ಮತ್ತು ಶುಕ್ರವಾರ ಗಳಲ್ಲಿ ರಾಶಿ ಅಥವಾ ಲಗ್ನವನ್ನು ಪ್ರವೇಶಿಸುವ ಚಂದ್ರನು ಶುಭ ಫಲಗಳನ್ನು ನೀಡುತ್ತಾನೆ. ಒಳ್ಳೆಯ ಸ್ನೇಹಿತರನ್ನು ಸಂಧಿಸುತ್ತೀರಿ. ಉನ್ನತ ಬಡ್ತಿ, ಅಂತಸ್ತು ಪ್ರಾಪ್ತಿಯಾಗುತ್ತದೆ. ಪ್ರಾಚೀನ ಗ್ರಂಥಗಳನ್ನು ಅಧ್ಯಯನ ಮಾಡುವ ಅವಕಾಶ ಭಾಗ್ಯೋದಯಆದರೂ ಮತ್ತೆ ವಾರಾಂತ್ಯ ಬೇಸರದಲ್ಲೇ ಕೊನೆಯಾಗುತ್ತದೆ. ಕುಟುಂಬದಲ್ಲಿ ತೊಂದರೆಗಳು, ವ್ಯಾಧಿಗಳು, ಖರ್ಚುಗಳು ಹೆಚ್ಚಾಗುತ್ತವೆ. ಯಾವುದೇ ಕಾರಣವಿಲ್ಲದೆ ಸಂಬಂಧಿಕರ ಜೊತೆ ಶತ್ರುತ್ವ ಹೆಚ್ಚಾಗುತ್ತದೆ. ವಾರಾಂತ್ಯದಲ್ಲಿ ವಿಷ್ಣುವಿನ ಆರಾಧನೆ ಶುಭ ತರುತ್ತದೆ.
ಕನ್ಯಾ ರಾಶಿ : ಕನ್ಯಾರಾಶಿಯವರಿಗೆ ವಾರದ ಮೊದಲ ಮೂರು ದಿನ ಶುಭಪ್ರದವಾಗಿದ್ದು ಗೌರವ ಪ್ರಾಪ್ತಿ, ಉಲ್ಲಾಸ, ಸಂತೋಷ, ಧೈರ್ಯ, ಉತ್ಸಾಹ ಪಡೆದು ಅನೇಕ ವಿಧವಾದ ಕಾಣಿಕೆಗಳು ಬಹುಮಾನಗಳನ್ನು ಪಡೆಯಬಹುದು. ಉದ್ಯೋಗ,ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆದಾಯದಲ್ಲಿ ಏರಿಕೆಯಾಗುತ್ತದೆ. ವಿವಾಹ ಭಾಗ್ಯ, ದೀರ್ಘ ವ್ಯಾಧಿಗಳಿಂದ ಮುಕ್ತಿ, ವ್ಯಾಜ್ಯ ಮತ್ತು ವೈರಿಗಳ ನಿರ್ಮೂಲನೆ ಗೊಳ್ಳುತ್ತಾರೆ. ಆದರೆ ಗುರು ಶುಕ್ರವಾರಗಳಲ್ಲಿ ಸ್ವಲ್ಪ ತೊಂದರೆಗಳು ಆಗಬಹುದು. ವಿಷಯದ ವಿಷಯಗಳಿಗೆ ಹೆಚ್ಚು ಬೇಸರ ಪಡುವುದು, ಅಪಘಾತದ,ಭಯ, ಸೋಮಾರಿತನ ಹೆಚ್ಚಾಗುತ್ತದೆ. ಸ್ತ್ರೀಯರಿಂದ ಅಧಿಕ ಖರ್ಚು, ಅನಾರೋಗ್ಯ ಹೆಚ್ಚಾಗುತ್ತದೆ. ಆದರೆ ವಾರಾಂತ್ಯದಲ್ಲಿ ಮತ್ತೆ ರಾಶಿಗೆ ಪ್ರವೇಶಿಸುವ ಚಂದ್ರನು ಶುಭ ಫಲಗಳನ್ನು, ಸಕಲ ಸೌಕರ್ಯಗಳನ್ನು ನೀಡುತ್ತಾನೆ. ವಾರ ಮಧ್ಯದಲ್ಲಿ ಸುಬ್ರಹ್ಮಣ್ಯನ ಆರಾಧನೆ ಶುಭ ತರುತ್ತದೆ.
ತುಲಾ ರಾಶಿ : ತುಲಾ ರಾಶಿಯವರಿಗೆ ವಾರದ  ಮೊದಲ ದಿನ 9ನೇ ಮನೆಯಲ್ಲಿ ಸಂಚರಿಸುವ ಚಂದ್ರ ಅಶುಭ ಫಲಗಳನ್ನು ನೀಡುತ್ತಾನೆ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾಗುತ್ತದೆ. ಮಕ್ಕಳ ಜೊತೆ ವಾದ ವಿವಾದಗಳು, ಸಾಮಾನ್ಯವಾದ ಆರೋಗ್ಯ ಪರಿಸ್ಥಿತಿ ಎದುರಾಗಬಹುದು. ವಾರ  ಮಧ್ಯದ ನಾಲ್ಕು ದಿನ ಶುಭ ಫಲಗಳು ಸಿಗುತ್ತವೆ. ವ್ಯಾಪಾರ – ವ್ಯವಹಾರದಲ್ಲಿ ಉತ್ತಮವಾದ ಸ್ಥಾನ ಪ್ರಾಪ್ತಿಯಾಗುತ್ತದೆ. ಗೌರವ, ಉಲ್ಲಾಸ, ಸಂತೋಷಗಳು ಹೆಚ್ಚಾಗುತ್ತವೆ. ಉತ್ತಮ ಕೆಲಸಕ್ಕೆ ಬದಲಾವಣೆ  ಸಿಗುತ್ತವೆ, ಉತ್ತಮ ಗುಣವಂತರನ್ನು ಭೇಟಿಯಾಗುವ ಸಮಯ, ದ್ರವ್ಯ ವ್ಯಾಪಾರಿಗಳಿಗೆ ಲಾಭ, ಉತ್ತಮ ಆರೋಗ್ಯ, ವಿವಾಹ ಭಾಗ್ಯ ಆದರೆ ವಾರದ ಕೊನೆಯ ದಿನ ಚಂದ್ರ ಮತ್ತು ಕುಜರಿಬ್ಬರು 12ನೇ ಮನೆಯಲ್ಲಿದ್ದು ಸಂಬಂಧಿಕರ ಜೊತೆ ಶತ್ರುತ್ವ, ದೇಹದಲ್ಲಿ ತೊಂದರೆ, ಅದರಲ್ಲೂ ಮೂಳೆಗೆ ಸಂಬಂಧಿಸಿದ ತೊಂದರೆಗಳು, ಬೀಳುವುದರಿಂದ ಅಥವಾ ಅಪಘಾತ ವಾಗುವುದರಿಂದ ತೊಂದರೆಯಾಗಬಹುದು, ಭಯ ಹೆಚ್ಚಾಗುತ್ತದೆ.ಸಹೋದರರೊಡನೆ ಉತ್ತಮ ಸಂಬಂಧಕ್ಕಾಗಿ ಪ್ರಾಯಾಸ ಪಡಬೇಕಾಗಿ ಬರಬಹುದು. ವಾರಾಂತ್ಯದಲ್ಲಿ ಸುಬ್ರಹ್ಮಣ್ಯನ ಆರಾಧನೆ ನೆಮ್ಮದಿಯನ್ನು ನೀಡುತ್ತದೆ.
ವೃಶ್ಚಿಕ ರಾಶಿ : ವೃಶ್ಚಿಕರಾಶಿಯವರಿಗೆ ವಾರದ ಮೊದಲನೇ 3 ದಿನ ಅಶುಭ ಫಲಗಳು ನೀಡುವಂತಿದ್ದು  8ನೇ ಮನೆಯಲ್ಲಿ ಸಂಚರಿಸುವ ಚಂದ್ರ, ರಾಹು ಇಬ್ಬರು ತೊಂದರೆಗಳನ್ನು ಸೂಚಿಸುತ್ತಾರೆ. ಸಾಮಾನ್ಯವಾದ ಆರೋಗ್ಯ, ಅನವಶ್ಯಕವಾದ ಪ್ರಯಾಣಗಳು, ಪ್ರಯಾಣದಲ್ಲಿ ಜೊತೆಗಾರರು ಇಲ್ಲದೆ ಬೇಸರ ಮತ್ತು ಆಯಾಸ. ನೀತಿಗೆಟ್ಟ ಕೆಲಸಗಳನ್ನು ಮಾಡುವಂತಹ ಮನಸ್ಥಿತಿ, ಅಂಟು ಜಾಡ್ಯಗಳು, ಸಂತಾನಕ್ಕೆ ಅಪಾಯವಾಗುವ ಸಂಭವ, ಉನ್ನತ ವಿದ್ಯಾಭ್ಯಾಸಕ್ಕೆ ಅಡ್ಡಿಗಳು ಆದರೆ ವಾರದ  ಕೊನೆಯ ನಾಲ್ಕು ದಿನ ಸಾರ್ವಜನಿಕ ಸಂಪರ್ಕ ಉತ್ತಮವಾಗಿ ಗಳಿಸುವುದು, ಸರ್ಕಾರಿ ಕೆಲಸಕ್ಕೆ ಪ್ರಯತ್ನ ಫಲಕರಿಯಗುತ್ತದೆ, ಯಾತ್ರೆಗಳು ಕೈಗೊಳ್ಳುತ್ತಾರೆ, ಅಧಿಕಾರ ಪಡೆಯುತ್ತಾರೆ, ವ್ಯಾಪಾರ ವ್ಯವಹಾರದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಆದಾಯದಲ್ಲಿ ಏರಿಕೆ ಕೂಡ ಕಾಣಬಹುದು, ವ್ಯಾಜ್ಯಗಳನ್ನು ನಿರ್ಮೂಲನೆ ಗೊಳಿಸುತ್ತಿದೆ. ವಾರದ ಮೊದಲ ಮೂರು ದಿನ ವಿಷ್ಣುವಿನ ಆರಾಧನೆ ಮಾಡುವುದು ಉತ್ತಮ.
ಧನಸ್ಸು ರಾಶಿ : ವಾರದ ಮೊದಲ ದಿನ  ಏಳನೇ ಮನೆಯಲ್ಲಿ ಸಂಚರಿಸುವ ಚಂದ್ರ ಸ್ವಲ್ಪಮಟ್ಟಿಗೆ ಶುಭ ಫಲಗಳನ್ನು ನೀಡುತ್ತಾನೆ. ಆದರೂ ಏಳರಲ್ಲಿ ರಾಹು ಪತ್ನಿಯ ಜೊತೆ ಅನವಶ್ಯಕ ಕಲಹಗಳನ್ನು, ಅಕಸ್ಮಾತ್ ಆದ ವಿಪತ್ತುಗಳನ್ನು, ವಾದದಿಂದ ಶತ್ರುತ್ವ ಬೆಳೆಯುತ್ತದೆ. ಅಪಮಾನಕ್ಕೆ ಒಳಗಾಗುವ ನೀಚ, ಸ್ತ್ರೀಯಿಂದ ಅಪವಾದಗಳು ಬರುತ್ತವೆ. ಗುಪ್ತ ರೋಗ, ಅನಾರೋಗ್ಯ, ಕೋಪ ಕಲಹ ಹೆಚ್ಚಾಗುತ್ತವೆ. ಸಾಮಾನ್ಯವಾದ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನೆಡೆ, ವ್ಯಾಪಾರದಲ್ಲಿ ನಷ್ಟ ಅನುಭವಿಸಬಹುದು. ಆದರೆ ವಾರದ ಕೊನೆಯ ದಿನ ಸಾರ್ವಜನಿಕ ಸಂಪರ್ಕ ಉತ್ತಮವಾಗಿದ್ದು ವಾರಂತ್ಯ ಉತ್ತಮ ಗುಣವಂತ ರನ್ನು ಭೇಟಿಯಾಗಿ ಯಶಸ್ಸನ್ನು, ಗೌರವವನ್ನು ಪಡೆಯುವ ಅವಕಾಶಗಳು ಇರುತ್ತವೆ. ವಾರದ ಮೊದಲನೆಯ ದಿನ ವಿಷ್ಣುವಿನ ಆರಾಧನೆ, ಅಕ್ಕಿ ಮತ್ತು ಗೋಧಿ ದಾನ  ಒಳ್ಳೆಯದು.
ಮಕರ ರಾಶಿ : ವಾರದ ಮೊದಲ ಮೂರು ದಿನ ಮಕರ ರಾಶಿಯವರಿಗೆ ಶುಭಫಲಗಳು ದೊರೆಯುತ್ತವೆ. ಧನ ಸಂಗ್ರಹವಾಗುತ್ತದೆ. ಉಲ್ಲಾಸ ಮತ್ತು ಸಂತೋಷವಾಗಿರುತ್ತೀರಿ. ಹೆಸರು, ಖ್ಯಾತಿ ಪಡೆದು ಶಾಂತಿಯುತ ಗೃಹಜೀವನ ನಡೆಸುತ್ತಿರಿ. ಉತ್ತಮವಾದ ರುಚಿಕರವಾದ ಆಹಾರ, ಪಾನೀಯಗಳು ದೊರೆಯುತ್ತದೆ. ಮಾನಸಿಕವಾಗಿ ಸಂತೋಷ, ಹಿರಿಯರಿಂದ ಆಶೀರ್ವಾದ ದೊರೆಯುತ್ತದೆ.ಇಷ್ಟಪಟ್ಟ ಸ್ಥಳಗಳಿಗೆ ವರ್ಗಾವಣೆ ಹೊಂದುತ್ತೀರಿ.ಸರ್ಕಾರದ ಜೊತೆಗಿನ ವ್ಯವಹಾರದಿಂದ ಲಾಭಗಳಿಸುವ ಅವಕಾಶಗಳಿರುತ್ತವೆ. ಆದರೆ ವಾರದ ಕೊನೆಯ ಮೂರು ದಿನ ಕೋಪ ಕಲಹ ಹೆಚ್ಚಾಗುತ್ತದೆ. ಮೂರ್ಖತನ ಕೆಲಸಗಳು ಹೆಚ್ಚಾಗಿ ಮಾಡುತ್ತೀರಿ. ಸಾರ್ವಜನಿಕ ಜೀವನದಲ್ಲಿ ಅಪಮಾನಗಳ ಆಗಬಹುದು,ಅಜೀರ್ಣ, ಶ್ವಾಸ ನಾಳಕ್ಕೆ ಸಂಬಂಧಿಸಿದ ವ್ಯಾಧಿ ಹೆಚ್ಚಾಗುತ್ತದೆ. ಮಕ್ಕಳೊಂದಿಗಿನ ಸಂಬಂಧದಲ್ಲಿ ತೊಂದರೆ. ಗೋಧಿಯನ್ನು ದಾನ ಮಾಡುವುದು ಹಾಗೂ ವಿಷ್ಣುವಿನ ಆರಾಧನೆ ಉತ್ತಮ.
ಕುಂಭ ರಾಶಿ : ಕುಂಭ ರಾಶಿಯವರಿಗೆ ವಾರದ ಮೊದಲ ಮತ್ತು ಕೊನೆಯ ದಿನ ತೊಂದರೆಗಳನ್ನು ನೀಡಿದರು ವಾರ ಮಧ್ಯದಲ್ಲಿ ಅತ್ಯಂತ ಶುಭ ಫಲಗಳನ್ನು ಕಾಣಬಹುದು. ಕೋರ್ಟ್ ವ್ಯವಹಾರದಲ್ಲಿ ಲಾಭ, ವ್ಯಾಧಿಗಳ ನಿವಾರಣೆ, ವಾಣಿಜ್ಯ ವ್ಯಾಪಾರದಲ್ಲಿ ಲಾಭ, ಹತ್ತಿರದ ಲಾಭದಾಯಕ ಪ್ರಯಾಣಗಳು ಸೌಕರ್ಯಗಳು ಹೆಚ್ಚಾಗುತ್ತವೆ. ಮಾನಸಿಕವಾಗಿ ನೆಮ್ಮದಿ ಆಗಿರುತ್ತೀರಿ. ಪ್ರಾಚೀನ ವಿಜ್ಞಾನದ ಜ್ಞಾನವನ್ನು ಪಡೆಯುವ ಅವಕಾಶ, ಉತ್ತಮ ಸಂಸಾರಿಕ ಜೀವನ, ಪ್ರಾಪಂಚಿಕ ವಾದಂತಹ ಅನುಕೂಲಗಳು ನಿಮ್ಮದಾಗುತ್ತವೆ. ಉಲ್ಲಾಸವಾಗಿ ಇರುವಂತಹ ಸಮಯ ಇದು ಆದರೆ ವಾರದ ಕೊನೆಯಲ್ಲಿ ಅವಮಾನಗಳು  ಆಗಬಹುದು. ವಾರದ ಕೊನೆಯಲ್ಲಿ ಎಂಟಕ್ಕೆ ಸಂಚರಿಸುವ ಚಂದ್ರ  ಧನ ನಷ್ಟವನ್ನು, ಮೂಳೆಯ ಸಂಧಿ ನೋವುಗಳನ್ನು, ಪತ್ನಿಯ ಜೊತೆ ಕಲಹವನ್ನು, ಆಯಾಸವನ್ನು ಸೂಚಿಸುತ್ತಾನೆ. ಒಟ್ಟಿನಲ್ಲಿ ಅಭಿವೃದ್ಧಿಗೆ ಇದು ಉತ್ತಮ ಕಾಲವಲ್ಲ. ವಾರದ ಮೊದಲು ಮತ್ತು ಕೊನೆಯ ದಿನ ವಿಷ್ಣುವಿನ ಆರಾಧನೆ ಅತ್ಯಂತ ಅನಿವಾರ್ಯ.
ಮೀನ ರಾಶಿ : ಮೀನರಾಶಿಯವರಿಗೆ ವಾರದ ಮೊದಲ ಮೂರು ದಿನ ಅಶುಭ ಫಲಗಳು ದೊರೆಯುತ್ತವೆ. ಸ್ಥಾನಪಲ್ಲಟ,ನಿದ್ರಾಭಂಗ, ಎದೆಯಲ್ಲಿ ನೋವು ಹಾಗೂ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ,ಪ್ರಯತ್ನಗಳಲ್ಲಿ ಸೋಲು, ಗ್ಯಾಸ್ಟ್ರಿಕ್ ಹೆಚ್ಚಾಗಬಹುದು. ನಿಮ್ಮ ಹೆಸರು ಖ್ಯಾತಿಗೆ ತೊಂದರೆಯಾಗುತ್ತದೆ. ಆದರೆ ವಾರಾಂತ್ಯದಲ್ಲಿ ಆರು ಮತ್ತು ಏಳರಲ್ಲಿ ಸಂಚರಿಸುವ ಚಂದ್ರ ಶುಭ ಫಲಗಳನ್ನು ನೀಡುತ್ತಾನೆ. ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಸಮಯ, ನಾಶವಾದ ಅಂತಸ್ತು ಮರಳಿ ಪಡೆಯಬಹುದು. ಉಲ್ಲಾಸ, ಹೆಸರು ಖ್ಯಾತಿ ಪಡೆದು ಶಾಂತಿಯುತ ಗೃಹಜೀವನ ನಡೆಸುತ್ತೀರಿ. ಪಾಲುದಾರಿಕೆಯಲ್ಲಿ ಲಾಭ, ಹಿರಿಯರಿಂದ ಮಾರ್ಗದರ್ಶನ ದೊರೆಯುತ್ತದೆ. ಧಾರ್ಮಿಕ ಗ್ರಂಥಗಳನ್ನು ಓದಿ ಜ್ಞಾನ ಸಂಪಾದಿಸುವ ಅವಕಾಶಗಳು ದೊರೆಯುತ್ತವೆ. ವಾರದ ಮೊದಲ ಮೂರು ದಿನ ವಿಷ್ಣುವಿನ ಆರಾಧನೆ, ಅಕ್ಕಿ ಮತ್ತು ಹಾಲನ್ನು ದಾನ ಮಾಡುವುದು ಉತ್ತಮ.

Comments

  1. This is an excellent blog and thanks for sharing the information. Astrologer Sharma Ji has been providing the best astrology services in Canada for over 20 years. Astrologer in Mississauga | Top Astrologer in Mississauga | Palm Reader in Mississauga | Psychic Reader in Mississauga | Black Magic Removal in Mississauga

    ReplyDelete

Post a Comment